ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯ ರಾಮ್ ಕುಮಾರ್ ಕೊಟ್ಟ ಹೊಸ ಸುದ್ದಿ | Oneindia Kannada

2018-03-14 1

Dr Rajkumar grand daughter Dhanya Kumar has made it clear that she will not act in the films. Dhanya Kumar granddaughter of Dr. Rajkumar, she is currently working as Public Relations Officer


ಡಾ ರಾಜ್ ಕುಮಾರ್ ಕುಟುಂಬದ ಕಡೆಯಿಂದ ಹೆಣ್ಣು ಮಕ್ಕಳು ಸಂಪೂರ್ಣವಾಗಿ ಸಿನಿಮಾರಂಗದಲ್ಲಿ ಯಾರು ತೊಡಗಿಸಿಕೊಂಡಿಲ್ಲ. ಶಿವಣ್ಣನ ಕಿರಿಯ ಪುತ್ರಿ 'ಅಂಡಮಾನ್' ಸಿನಿಮಾದಲ್ಲಿ ಅಭಿನಯಿಸಿದ ನಂತರ ಮತ್ತೆ ಸಿನಿಮಾರಂಗದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ಕೆಲ ದಿನಗಳಿಂದ ಅಣ್ಣಾವ್ರ ಮೊಮ್ಮಗಳು ಸಿನಿಮಾರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ. ಪೂರ್ಣಿಮಾ ಅವರ ಮಗಳಾದ ಧನ್ಯ ರಾಮ್ ಕುಮಾರ್ ಚಿತ್ರದಲ್ಲಿ ಅಭಿನಯಿಸುತ್ತಾರಂತೆ ಅದಕ್ಕಾಗಿ ಪೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಈಗಾಗಲೇ ಎಲ್ಲಾ ರೀತಿಯ ತಯಾರಿ ಮಾಡಿದ್ದಾರೆ ಎಂದು ಗಾಂಧಿನಗರದ ಗಲ್ಲಿಯಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಗಾದರೆ ಧನ್ಯ ರಾಮ್ ಕುಮಾರ್ ಏನು ಮಾಡುತ್ತಿದ್ದಾರೆ? ಫೋಟೋ ಶೂಟ್ ಮಾಡಿಸಿದ್ದು ನಿಜನಾ? ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ಎಂಟ್ರಿ ಪಡೆದುಕೊಳ್ಳುತ್ತಾರಾ?